Gulbarga South By Election
Thursday, September 16, 2010
ಬಿಜೆಪಿ, ನಮೋಶಿ ಕಾರಿಗೆ ಕಲ್ಲು ಚಪ್ಪಲಿ ಎಸೆತ
ಬಿಜೆಪಿ, ನಮೋಶಿ ಕಾರಿಗೆ ಕಲ್ಲು ಚಪ್ಪಲಿ ಎಸೆತ : - ಗುಲ್ಬರ್ಗಾ ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣೆ ಮತ ಎಣಿಕೆ ಕೇಂದ್ರದಲ್ಲಿ ಮತ ಎಣಿಕೆ ಕಾರ್ಯ ಮುಗಿದು ಜೆಡಿಎಸ್ ಅಭ್ಯರ್ಥಿ ಜಯ ಹೊಂದಿದ್ದರೆ ಎಂದು ಘೋಸಿಸುತ್ತಿದ್ದಂತೆಯೇ ಎಣಿಕೆ ಕೇಂದ್ರದಿಂದ ಹೊರ ನಡೆದ ಬಿಜೆಪಿಯಾ ನಮೋಶಿ ಅವರು ತಮ್ಮ ಕಾರಿನಲ್ಲಿ ಕುಳಿತು ಮುಂದೆ ಸಾಗುತ್ತಿದ್ದಂತೆಯೇ ಅಲ್ಲಿದ್ದ ಕೆಲವು ಕಿಡಿಗೆಡಿಗಳು ಅವರ ಕಾರಿನ ಮುಂದೆ ಬಂದು ಅವಾಚ್ಚ ಶಬ್ದಗಳಿಂದ ನಿಂದಿಸಿ ಅವರ ಕಾರಿನ ಮೇಲೆ ಕಲ್ಲು ಚಪ್ಪಲಿ ಎಸೆದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಈ ಸಂದರ್ಬದಲ್ಲಿ ಮದ್ಯ ಪ್ರವೇಶಿಸಿದ ಅರಕ್ಷಕರು ಪರಿಸ್ಥಿತಿ ತಿಳಿಗೊಳಿಸಿ ನಮೋಶಿ ಅವರನ್ನು ಬಿಗಿ ಬದ್ರತೆಯಲ್ಲಿ ಅಲ್ಲಿಂದ ಕಳುಹಿಸಲಾಯಿತು.
Election News
ಗುಲ್ಬರ್ಗಾ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಜೆಡಿಎಸ್ ಗೆಲುವು : ಗುಲ್ಬರ್ಗಾ ದಕ್ಷಿಣ ಕ್ಷೇತ್ರವನ್ನು ಶತಾಯ ಗತಾಯ ಗೆಲ್ಲಲೇ ಬೇಕೆಂಬ ಪಣ ತೊಟ್ಟ ರಾಜ್ಯ ಸರ್ಕಾರವು ಜಿಲ್ಲೆಯಲ್ಲಿ ಇಡಿ ಸಚಿವ ಸಂಪುಟವೇ ಟಿಕಾಣಿ ಹೂಡಿ ತಮ್ಮಿಂದ ಏನೆಲ್ಲಾ ರೀತಿಯ ಕಸರತ್ತು ಸಾದ್ಯವೋ ಎಲ್ಲವನ್ನು ಮಾಡಿದರು, ಆದರೆ ಮತದಾರ ಮಾತ್ರ ಸರ್ಕಾರದ ನಿರೀಕ್ಷೆ ಸಂಪೂರ್ಣ ಹುಸಿ ಮಾಡಿದ್ದಾನೆ, ಜಿದ್ದಾಜಿದ್ದಿನ ಪಣದಲ್ಲಿ ಜೆಡಿಎಸ್ ನ ಅರುಣ ಪಾಟೀಲ್ ರೆವುರ್ ಅವರು 3672 ಮತಗಳ ಅಂತರದಿಂದ ಜಯಗಳಿಸಿದ್ದಾರೆ, ಇಲ್ಲಿ ಗಮನಾರ್ಹ ವಿಷಯವೇನೆಂದರೆ ಇಡಿ ಸರ್ಕಾರವೇ ಬಿಜೆಪಿ ಅಬ್ಯರ್ಥಿ ಪರ ಪ್ರಚಾರ ನಡೆಸಿತು ಸ್ವತಹ ಮುಖ್ಯಮಂತ್ರಿಗಳು ಒಂದು ವಾರ ಟಿಕಾಣಿ ಹೂಡಿದ್ದರಿ ಯಾವುದೇ ಪ್ರಯೋಜನ ಆಗಲಿಲ್ಲ,
Subscribe to:
Posts (Atom)